ಪಂಚೆ ಪಾಲಿಟಿಕ್ಸ್

ಮೊದ ಮೊದಲು ಪಂಚೆಯನು ಟೊಂಕಕ್ಕೆ ಕಟ್ಟುವುದು ಕಷ್ಟವೆನಿಸುತ್ತಿತ್ತು. ಯಾವ ಪಂಚೆ ಕೊಟ್ಟರೂ ಕಾಟಾಚಾರಕ್ಕೆ ಕೊಟ್ಟರೆಂದು ಕಟ್ಟಿಕೊಳ್ಳುತ್ತಿದ್ದೆ. ಆಗ ಅದು ಮೊದಲನೆಯ ವರ್ಷ..ನನ್ನ ಸಹಚರರು …ಆಗಲೇ ರಾಗ ಎತ್ತಿದ್ದರು ….ನಮಗೆ ಪ್ಲೈನ್  ಪಂಚೆ ಕೊಟ್ಟು ತಾವು ಮಾತ್ರ .. ಪಟ್ಟೆ ಪಂಚೆ ಪಡೆಯುತ್ತಿದ್ದರೆಮ್ಬುದು ಅವರ ಅಮ್ಬೋಣವಾಗಿತ್ತು….!!! ಆ ‘ತಾವು’ ಎಂಬುದು ಯಾರೆಂದು ತಮಗೆ ತಿಳಿಸುವ ತಾಳ್ಮೆಯಿಲ್ಲ , ಏಕೆಂದರೆ ಆ ‘ತಾವು’ ನಾವೆಮ್ಬುದು ಗೊತ್ತಾದದ್ದು ಕೊನೆಯ ವರ್ಷ…..! ಆದರೆ ಆ ವರ್ಷ ನಡೆದ ಕಥೆಯೇ ಬೇರೆ ….ನಾನು ‘ಪಂಚೆ ಪಾಲಿಟಿಕ್ಸ್’ ಮಾಡಲು ಹೋಗಿ ಪಟ್ಟೆ ಪಂಚೆ ಬೇರೆಯವರ ಪಾಲಾದದ್ದು ಹಳೆಯ ಸಂಗತಿ …. ತಿಳಿಯದ ಸಂಗತಿ ಕೂಡ !  ಆ ಪಂಚೆ ಪಾಲಿಟಿಕ್ಸ್ ತಿಳಿದಿದ್ದರೆ .. ಅದು ಒಬ್ಬರಿಗೆ ಮಾತ್ರ ….ಹಾಗಾದರೆ ಅದು ಯಾರೆಂದು ಹೇಳಬಲ್ಲಿರ ?Image

Advertisements