ನವ ಪ್ರಪಂಚ

ನನ್ನದೊಂದು ಬೇರೆ ಪ್ರಪಂಚ.......!!
ಕಪ್ಪು ಕಿರಣಗಳನು ಹೊರ ಸೂಸುತ್ತಿದ್ದ ..ಬಿಳಿಯ ಟ್ಯೂಬು ಲೈಟುಗಳು.!
ಕತ್ತೆಗಳ ನಾಗಾಲೋಟ..ಎಮ್ಮೆಗಳ  ಕೋಗಿಲೆ ಕಂಠ....!!!
ಕಾವಿ ಬಟ್ಟೆಯಲಿನ...ಕುನ್ನಿಗಳ ..ಕಯ್ಯಲಿ...!!!!!!!!
ಬಟಾಟೆ ಬೋಂಡ ಬಜ್ಜಿಗಳ...ಜಪಮಾಲೆ...!!!!
(ಮುಂದುವರೆಯುವುದು... )
Advertisements

ಸುಮ್ಮನಿರುವೆಯೇಕೆ.. ಸುರ ಸುಂದರಿ !

ಸುಮ್ಮನಿರುವೆಯೇಕೆ ಸುರ ಸುಂದರಿ !
ಸರಸ ಸಲ್ಲಾಪಗಳು ಸತ್ತುಹೋದವೆ ……..!?
ಸಂತೃಪ್ತಿ,… ಸುರಿದೊಡನೆ ಸುಟ್ಟುಹೊಯಿತೇ
ಸಾಕು!.. ಸತಾಯಿಸಿ ಸ್ವಯಂ ಸಾಯದಿರು!
ನನ್ನ ಸತಾಯಿಸದಿರು !

ಕನ್ನಡದ ವನದಲ್ಲಿ ಕುಳಿತು ‘ಕ’ವನ ವನು ಬರೆದೆ .

ಕನ್ನಡದ ವನದಲ್ಲಿ ಕುಳಿತು ‘ಕ’ವನ ವನು ಬರೆದೆ .
ಕಂಗೊಳಿಸಿದ   ಕಂಗಳೇ ಅದಕೆ ಸ್ಫೂರ್ತಿ !
ನೋಡಿದೆರಡು ಕಂಗಳು ನಲಿಯ  ಹತ್ತಿದ್ದವು …
‘ನೇತ್ರಧಾಮ’ದ ಮತ್ತೆರಡು ಕಂಗಳೇ ಸಾಕ್ಷಿ!….

ಚಕ್ಕುಲಿ ಅಭಿಯಾನ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಚಕ್ಕುಲಿ ಅಭಿಯಾನವನ್ನು ಗಣಪತಿ ಆಗಮನದ ಒಂದು ವಾರದ ಹಿಂದೆ ಆರಂಭಿಸಲಾಯಿತು. ಕೆಲವು ಚಕ್ಕುಲಿಗಳು ವರ್ತುಲಾಕಾರದಲ್ಲಿ ಮೂಡಿ ಬಂದರೆ,ಇನ್ಕೆಲವು ಮುರಿದು ಹೋದವು , ಹಾಗೆ ಮುರಿದ ಚಕ್ಕುಲಿಗಳೂ ಹಳದಿ ಹಲ್ಲುಗಳ ಮಧ್ಯದಲಿ ಅರೆದು ಹೋದವು. ಹಳದಿ ಹಲ್ಲುಗಳ ಮಧ್ಯದಲಿ ಅರೆದು ಹೋಗುತ್ತಿದ್ದ ಚಕ್ಕುಲಿಗಳ ಆಕ್ರಂದನದಲಿ ‘ಕರಂ’ ಮತ್ತು ‘ಕುರುಂ’ ಶಬ್ದಗಳ ನಡುವಿನ ಯುದ್ಧ ಕುರುಕ್ಷೆತ್ರದಂತಿತ್ತು. ಈ ಕುರುಕ್ಷೇತ್ರ ಯುದ್ಧಕ್ಕೆ ಕರಗಳು ಚಕ್ಕುಲಿಗಳ ಬಾಣ ಬಿಟ್ಟು ಚೆಂದ ನೋಡ ಹತ್ತಿದ್ದವು. ಹೀಗೆ ಮುಂದುವರಿಯುತ್ತಿದ್ದ ಚಕ್ಕುಲಿ ಅಭಿಯಾನದಲ್ಲಿ ಪ್ರತಿಯೊಬ್ಬರ ಪಾತ್ರವೂ ಅಷ್ಟೇ ಮಹತ್ವದ್ದಾಗಿತ್ತು. ಖಾಲಿಯಾಗುತ್ತಿದ್ದ ಚಕ್ಕುಲಿ ಡಬ್ಬಗಳಿಗೆ ಲೆಕ್ಕವೇ ಇಲ್ಲದಂತಾಯಿತು . ಇದನ್ನು ಕಂಡು ದಂಗಾದ ಚಕ್ಕುಲಿ ಡಬ್ಬಗಳು ಕಾಣುವ ಜಾಗದಿಂದ ಕಾಣದ ಜಾಗಗಳಿಗೆ ಮಾಯವಾಗತೊಡಗಿದವು. ಆ ಕಾಣದ ಜಾಗಗಳಿಗೆ ಮಾಯವಾದ, ಡಬ್ಬಗಳು, ಹುಟ್ಟು ಹಾಕಿದ್ದ ಹಳದಿ ಹಲ್ಲುಗಳ ಚಕ್ಕುಲಿ ಚಾಪಲ್ಯಕ್ಕೆ ಮಣಿದು ಕರಗಳಿಗೆ ಕೆಲಸವನ್ನು ಮಾಡಲು ಆದೇಶ ಹೊರಡಿಸತೊಡಗಿದವು. ಈ ಆದೇಶದಂತೆ ಕಾಣದ ಜಾಗಗಳಿಗೆ ಕಾಲ್ಗಳು ಕುಟುಕುಟನೆ ಅಗೋಚರ ಚಕ್ಕುಲಿಗಳ ಚಹರೆ ನೋಡಲು ಕಾತರದಿಂದ ಕಾಯುತ್ತಿದ್ದವು , ಹುಡುಕುತ್ತಿದ್ದವು ……………………………ಮುಂದೇನು ಸ್ವಾಮಿ ಅಂದಿರಾ ? …..ಮುಂದೆಲ್ಲ ನಿಮ್ಮದೇ …..!

ನಾಬಿಟ್ಟುಕೊಟ್ಟ ಜೀವನದ ಗುಟ್ಟುಗಳು – ೩

ಜೀವನದ ಪ್ರತಿ ಕ್ಷಣದಲ್ಲೂ  ನಮ್ಮನ್ನು, ಉತ್ತಮವಾಗಿಸುವುದೊಂದೇ  ಸಿದ್ಧಿಯೆಡೆಗಿನ   ದಾರಿ.

ನಾಬಿಟ್ಟುಕೊಟ್ಟ ಜೀವನದ ಗುಟ್ಟುಗಳು – ೨

ಕಾಫಿಯ ಮೊದಲ ‘ಸಿಪ್’ ಗೂ ಎರಡನೇ ‘ಸಿಪ್’ ಗೂ ಅಧಿಕ ವ್ಯತ್ಯಾಸವಿರುವುದಿಲ್ಲ . ಆದರೆ ಬದುಕಿನ ಒಂದು ಕ್ಷಣವಿದ್ದಂತೆ ಮತ್ತೊಂದು ಕ್ಷಣವಿರುವಿದಿಲ್ಲ.

ನಾಬಿಟ್ಟುಕೊಟ್ಟ ಜೀವನದ ಗುಟ್ಟುಗಳು – ೧

ನಾವು ಸಾಧಿಸಲು ಹುಟ್ಟಿದವರೇ , ಅಲ್ಲವೇ ಎಂದು ನಮ್ಮನ್ನು ಕೇಳಿ ಈ ಪ್ರಪಂಚ  ತೀರ್ಮಾನಿಸುವುದಿಲ್ಲ. ನಮ್ಮ ಸಾಧನೆಯನ್ನು ಮುಂದಿಟ್ಟುಕೊಂಡೇ ಪ್ರಪಂಚ ನಮ್ಮನ್ನು ತೂಕ ಮಾಡುವುದು.

Previous Older Entries Next Newer Entries