ಪಂಚೆ ಪಾಲಿಟಿಕ್ಸ್

ಮೊದ ಮೊದಲು ಪಂಚೆಯನು ಟೊಂಕಕ್ಕೆ ಕಟ್ಟುವುದು ಕಷ್ಟವೆನಿಸುತ್ತಿತ್ತು. ಯಾವ ಪಂಚೆ ಕೊಟ್ಟರೂ ಕಾಟಾಚಾರಕ್ಕೆ ಕೊಟ್ಟರೆಂದು ಕಟ್ಟಿಕೊಳ್ಳುತ್ತಿದ್ದೆ. ಆಗ ಅದು ಮೊದಲನೆಯ ವರ್ಷ..ನನ್ನ ಸಹಚರರು …ಆಗಲೇ ರಾಗ ಎತ್ತಿದ್ದರು ….ನಮಗೆ ಪ್ಲೈನ್  ಪಂಚೆ ಕೊಟ್ಟು ತಾವು ಮಾತ್ರ .. ಪಟ್ಟೆ ಪಂಚೆ ಪಡೆಯುತ್ತಿದ್ದರೆಮ್ಬುದು ಅವರ ಅಮ್ಬೋಣವಾಗಿತ್ತು….!!! ಆ ‘ತಾವು’ ಎಂಬುದು ಯಾರೆಂದು ತಮಗೆ ತಿಳಿಸುವ ತಾಳ್ಮೆಯಿಲ್ಲ , ಏಕೆಂದರೆ ಆ ‘ತಾವು’ ನಾವೆಮ್ಬುದು ಗೊತ್ತಾದದ್ದು ಕೊನೆಯ ವರ್ಷ…..! ಆದರೆ ಆ ವರ್ಷ ನಡೆದ ಕಥೆಯೇ ಬೇರೆ ….ನಾನು ‘ಪಂಚೆ ಪಾಲಿಟಿಕ್ಸ್’ ಮಾಡಲು ಹೋಗಿ ಪಟ್ಟೆ ಪಂಚೆ ಬೇರೆಯವರ ಪಾಲಾದದ್ದು ಹಳೆಯ ಸಂಗತಿ …. ತಿಳಿಯದ ಸಂಗತಿ ಕೂಡ !  ಆ ಪಂಚೆ ಪಾಲಿಟಿಕ್ಸ್ ತಿಳಿದಿದ್ದರೆ .. ಅದು ಒಬ್ಬರಿಗೆ ಮಾತ್ರ ….ಹಾಗಾದರೆ ಅದು ಯಾರೆಂದು ಹೇಳಬಲ್ಲಿರ ?Image

Advertisements

ಹಾರುವ ಹಕ್ಕಿಗೆ ಹಾಡುವ ಆಸೆ………ನಡೆಯುವ ಮನುಜಗೆ ಹಾರುವ ಆಸೆ

Imageಹಾರುವ ಹಕ್ಕಿಗೆ ಹಾಡುವ ಆಸೆ …ನಡೆಯುವ ಮನುಜಗೆ ಹಾರುವ ಆಸೆ ….  ಆಹಾ…. ಮನುಜಗೆ  ಪ್ರಕೃತಿ ನೀಡಿದ ಮತಿ … ಮನುಜ ಹಾರಾಡುತಿರೆ…ಹಕ್ಕಿ ನೋಡಿ ಬೆರಗಾಗುತಿದೆ …ಹಕ್ಕಿ  ಹಾಡುವದ   ಮುಂದುವರಿಸಿರೆ   …ಮನುಜ ಅದ ನೋಡಿ ಖುಷಿ ಪಡನೆ…..!!!! ಹಾರುವ ನೆಪದಲಿ ಹಕ್ಕಿಯ  ಹಾಡು ಹೋಗಲಿ …….ಹಾರಾಟ ನಿಲ್ಲಿಸಿರುವ ….!!!

ಭಯ ಅನ್ನುವುದು ಯಾರನ್ನೂ ಬಿಟ್ಟಿಲ್ಲ ಕಾಂತ…….!

ಜೋರು ಮಳೆ ಬಂದರೆ  ಸಾಕು…
…..ಮನೆಗಳಿಗೆ  ತೋಯ್ದು ಹೋಗುವ  ಭಯ….!!
ಅದೇ ಟಿವಿ ಸೀರಿಯಲ್ ಶುರುವಾದರೆ ……
….. ಬಕೆಟ್ಗಳಿಗೆ ಮಾತೆಯರ ಕಣ್ಣೀರಿನ ಭಯ  ….!!!!

ನನ್ನ ಕವನ

ಕವಿದ ಕಾರ್ಮೊಡಗಳಿಗೆ   ಕವನಗಳ  ತಂಪನು ನೀಡಿ
 ಬಿಸಿಯಾಗಿಹ  ಭುವಿಗೆ ಭಾವಗಳ ಭಾಷ್ಪವನು ಸುರಿಸಿ.......
ಬೇಗೆಯಲಿ ಬೇಯುತಿಹ ಹೃದಯವನು ತಣಿಸಿ
 ರವಿಯ ಜೊತೆ ಆಡುತಿಹ ಸ್ವಚ್ಚಂದ ಆಗಸವ  ನೋಡುವ ಬಾರಾ........!!!!!!!!!!!!!!!!!!!

ಬಾರದ ಭಾವಗಳು !! ಭಟ್ಟರ ಹೆಸರಿನ ಕರಾಮತ್ತು !!!

ಕವನಗಳ ಸಂಕೋಲೆಯಲಿ.. ಕಟ್ಟಿ ಹಾಕಿದೆ…
ಹಿಡಿದೆಳೆದರೂ….. ಹೊರ ಬರದ ಭಾವನೆಗಳು …………….!!
ತಲೆ ಕೆಟ್ಟು ….ಹೇಳಿದೆ ಸಚೇತನ ಭಟ್ಟರ ಹೆಸರು…….
ಹೊರಟವು ನೋಡಿ …ಮುದುರಿಸಿ ಡೊಂಕು ಬಾಲಗಳ……………………..!!!!!

ಕವಿತೆಗಳ ಆತ್ಮಹತ್ಯೆ

ನನ್ನ ಕವಿತೆಗಳು ನೆಣಲಿ ನೆeತದುತ್ತಿದ್ದವು......
ನೋಡಿದೆ...ಪಕ್ಕದಲಿ ಆತ್ಮಹತ್ಯಾ ಪತ್ರ...!!?
ಹೇಳಿದ್ದವು..ಹತ್ಯೆಗೆ. ನೀನೆ ನೇರ ಕಾರಣ ...!!
ಕಾರಣಗಳ ನೋಡಲು .....ಪಟ್ಟಿ ಮಾಡಿದ್ದವು......!
ಬಣ್ಣಿಸಿ ನಾ ಕೊಂದ ಭಾವನೆಗಳ...........................!!!!!

ಹಿಡಿದು ಹಾದರದ ಹಾದಿ !!!

ಹೋದಳು.. ಹಿಡಿದು ಹಾದರದ ಹಾದಿ...!
ಕೇಳಿದರೆ ಕಾರಣವ ಕಣ್ತುಂಬ ಕಂಬನಿ........!!
ಕೆಂಪಾದ ಕೆನ್ನೆಗಳು ಕಪ್ಪಾಗಿ ಹೋದವು..!
ಅದ ಕಂಡ ಕಂಗಳೂ ಕರಗಿ ಹೋಗುವಷ್ಟು ..........!!!!

ಹೊಟ್ಟೆಗೆ ಇಲ್ಲದಿರೆ ಹಿಟ್ಟು ಹಿಡಿಯಷ್ಟು ..
ಮತ್ತೇನು ಮಾಡಲಿ ಎಂದು ಗೋಗರೆದಳು....!
ನೋಡಿ ಅತ್ತಿತ್ತ ......***  ಬರುವೆಯಾ? ಎಂದಳು !!!!!
ಕಾರಣವ ಕೇಳಿದ್ದಕ್ಕಿದೆಂಥ ವಿಧಿಯು .....!!!!????

Previous Older Entries